B C Patil
@bcpatilkourava
ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸ
ವಿದ್ಯುತ್ ಅವಗಡ ಬೆಸ್ಕಾಂನಲ್ಲಿ ಮಾತ್ರ ಇಲ್ಲ ರಾಜ್ಯದಂತೆ ಇದೆ ರಾಜ್ಯಾದ್ಯಂತ ಎಲ್ಲಾ ಭಾಗಗಳಲ್ಲಿ ಎಚ್ಚರಿಕೆಯನ್ನು ನೀಡಿ ಕ್ರಮ ವಹಿಸಿ ಸರಿಪಡಿಸಲಿ ಕೇವಲ ಬೆಸ್ಕಾಂ ನಲ್ಲಿ ಮಾಡುವುದು ಕಣ್ಣು ಹರಿಸುವ ತಂತ್ರ ಆಗಬಾರದು ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳು ಬಾಗಿ ಕೂಡಲೇ ಕ್ರಮವಿಸಿ
ಈ ಜೋಳದ ಬೆಳೆಯಲ್ಲಿ ಜೋಳಕ್ಕಿಂತ ಮುಳ್ಳು ಸಜ್ಜೆ ಬೆಳೆದಿದ್ದು ಇದನ್ನು ನಿಯಂತ್ರಿಸಿದೆ ಹೋದರೆ ರೈತರು ನಷ್ಟವನ್ನು ಅನುಭವಿಸಬೇಕಾಗುತ್ತದೆ ಇದರ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಆದಷ್ಟು ಬೇಗ ಈ ಮುಳ್ಳು ಸಜ್ಜೆ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಕಂಡುಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

ಇಂದು ಪದ್ಮಭೂಷಣ ಪ್ರಶಸ್ತಿ ವಿಜೇತರು ಖ್ಯಾತ ನಟರಾದ ಅನಂತನಾಗ್ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. #TV9Kannada #bjpkarnataka #KannadaNews #prajavani #vijayakarnataka #KannadaCinema

ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಖಾಸಗಿ ಕಾರ್ಮಿಕರ ಕೆಲಸವನ್ನು 10 ಗಂಟೆಗೆ ವಿಸ್ತರಿಸುವುದು ಸ್ವಾಗತ ಆದರೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಅನ್ನುವಂತಾಗಬಾರದು ಸರ್ಕಾರಿ ನೌಕರರಿಗೆ ಕೂಡ ಇದು ಅನ್ವಯಿಸಬೇಕು ಸರ್ಕಾರಿ ನೌಕರರು ಕೂಡ 10 ಗಂಟೆ ಕೆಲಸ ಮಾಡಬೇಕು #TV9Kannada #bjpkarnataka
ಇಂದು ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮಡಿದ 240 ಜನ ಮತ್ತು ಹಾಸ್ಟೆಲಲ್ಲಿ ಇದ್ದಂತ 75 ಜನ ವಿದ್ಯಾರ್ಥಿಗಳ ಸಾವು ತುಂಬಾ ನೋವನ್ನು ತಂದಿದೆ. ಭಗವಂತ ಅವರೆಲ್ಲರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಅವರನ್ನು ಕಳೆದುಕೊಂಡ ನೋವನ್ನು ಬರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ #Ahmedabad #planecrash




ಸರ್ಕಾರದ ಹಾಗೂ ಗೃಹ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಮೂರು ಜನರ ಪ್ರಾಣ ಹಾನಿಯಾಗಿದೆ . ಸರಿಯಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಸಾವುಗಳುಸಂಭವಿಸಿರುತ್ತದೆ. ಸರ್ಕಾರವನ್ನು ನಡೆಸುವ ತಾಕತ್ ಇಲ್ಲದಿದ್ದರೆ ಗೌರವಾನ್ವಿತವಾಗಿ ನಿರ್ಗಮಿಸಿ
ಕಮಲ್ ಹಾಸನ್ ಅವರೇ ರಾಜಕಾರಣಿಗಳಿಗೆ ಭಾಷೆಯ ಬಗ್ಗೆ ಮಾತಾಡ್ಲಿಕ್ಕೆ ಅಧಿಕಾರ ಇಲ್ಲ ಅಂತ ಹೇಳುವ ನೀವೂ ಕೂಡ ರಾಜಕಾರಣಿಗಳು ನೀವು ಕೂಡ ಚುನಾವಣೆಗೆ ಸ್ಪರ್ಧಿಸಿದ್ರಲ್ಲ ರಾಜಕಾರಣಿಗಳು ಈ ದೇಶದ ಪ್ರಜೆಗಳಲ್ವಾ ಇದೆಲ್ಲ ಮೂರ್ಖತನದ ಮಾತು. #bjp4karnataka #byvijayendra #news18kannada #publictv #powertvnews #vijaykarnataka

ಕೋಮಲ ಚನ್ನಗೌಡ ಬಸನಾಳ ರಟ್ಟಿಹಳ್ಳಿ ತಾಲೂಕ ಮಕರಿ ಗ್ರಾಮದವರಾದ ಇವರು ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದು ಇವರಿಗೆ ಆರ್ಥಿಕ ತೊಂದರೆಯಾದ ಹಿನ್ನೆಲೆಯಲ್ಲಿ ಅವರಿಗೆ 10000 ರೂಗಳ ಧನಸಹಾಯ ಮಾಡಲಾಯಿತು ಅವರು ಇನ್ನೂ ಉತ್ತುಂಗಕ್ಕೆ ಬೆಳೆಯಲೆಂದು ಹಾರೈಸಿ ಶುಭಕೋರುವಾಯಿತು.

ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಖ್ಯಾತ ಲೇಖಕಿ ಭಾನು ಮುಷ್ತಾಕ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. @Kannadaliterature... @BJP4Karnataka @BYVijayendra @narendramodi



ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇದೆ ಮೇ 20ಕ್ಕೆ 2 ವರ್ಷ ತುಂಬುತ್ತದೆ...ರಾಜ್ಯ ಕಾಂಗ್ರೆಸ್ ಸರಕಾರ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ " ಸಾಧನಾ ಸಮಾವೇಶ" ಹೆಸರಿನಲ್ಲಿ ಮತ್ತು ಎರಡು ವರ್ಷದ ಗ್ಯಾರಂಟೀ ಬದುಕಿನ ಸಂಭ್ರಮಕ್ಕೆ ಎಂಬ ಹಣೆಪಟ್ಟಿಯೊಂದಿಗೆ ಸಮಾವೇಶ ಹಮ್ಮಿಕೊಂಡಿದೆ@BJP4Karnataka @narendramodi @BYVijayendra

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಇಳಕಲ್ ತಾಲೂಕು ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘ ಇಳಕಲ್ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಲಯನ್ಸ್ ಪರಿವಾರ ಇವರ ಸಹಯೋಗದೊಂದಿಗೆ ಹಿರೇಕೆರೂರಿನ ಗುರುಭವನದಲ್ಲಿ ಹಮ್ಮಿಕೊಳ್ಳಲಾದ ಮಲ-ಮಗಳು ನಾಟಕ ಕಾರ್ಯಕ್ರಮದಲ್ಲಿ ಭಾಗಿಯಾಗಲಾಯಿತು.




ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಷ್ಟಗಳು ದೂರವಾಗಿ, ಖುಷಿಯೊಂದೇ ನಿಮ್ಮೆಲ್ಲರ ಬದುಕಿನಲ್ಲಿ ನೆಲೆಯಾಗಲಿ. ಹೊಸ ಕನಸುಗಳು ಚಿಗುರೊಡೆದು, ಹೊಸ ಭರವಸೆಗಳು ಮೂಡಲಿ.

ನಿಟ್ಟೂರು ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಪ್ರಸಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.



