ಅನ್ಯಾಯದ ವಿರುದ್ದ
@anyayadavirudha
ನನ್ನ ಪ್ರಯತ್ನ ಜನರ ಉದ್ದಾರ, ಜನರ ಉತ್ತಮ ಬದುಕು ಮತ್ತು ಭ್ರಷ್ಟ ವ್ಯವಸ್ಥೆ ನಿರ್ಮೂಲನೆ. ನನ್ನ ಧ್ಯೇಯ: ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವುದು. ದಯವಿಟ್ಟು ಬೆಂಬಲಿಸಿ
ನೆನಪಿರಲಿ: ಅನೇಕ ಷರತ್ತುಗಳಿವೆ. ಯಾವುದೇ ಸಂಘ, ಹೋರಾಟಗಾರ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು youtube.com/post/UgkxBm36X…
ನೆನಪಿರಲಿ ಸ್ನೇಹಿತರೆ: ಓದದೆ, ಕಾನೂನು ತಿಳುವಳಿಕೆ ಇಲ್ಲದೆ ಸಾರ್ವಜನಿಕ ವಿಷಯಗಳಿಗೆ ನಾವು ಕೈ ಹಾಕಬಾರದು. ಈ ಕಾರಣಕ್ಕೆ ನಾನು ನನ್ನ ವೈರಿಯನ್ನೂ ಗೌರವಪೂರ್ವಕವಾಗಿ ಮಾತನಾಡಿಸುತ್ತೇನೆ. youtube.com/post/Ugkxci2Gj…
ಅವನು ಅಪರಾಧಿ ಎಂದು ನ್ಯಾಯಾಲಯ ನಿರ್ಧರಿಸುವವರೆಗೆ ಅವನು ಕೇವಲ ಆರೋಪಿ. ಆತನ ಗೌರವಕ್ಕೆ ದಕ್ಕೆ ಉಂಟು ಮಾಡುವ ಏನನ್ನೂ ಮೂರನೆಯ ವ್ಯಕ್ತಿಗಳಾದ ನಾವು(like ಪತ್ರಕರ್ತ, ಹೋರಾಟಗಾರ) ಮಾಡಬಾರದು. ನ್ಯಾಯಾಲಯದ ನಂತರವೇ ನಾವು. ನಿರ್ಣಯವಾಗುವವರೆಗೆ ಭ್ರಷ್ಟ, ಕಳ್ಳ, ಕೆಟ್ಟವನು ಎನ್ನುವ ಪದಗಳನ್ನು ನಾವು ಬಳಸಬಾರದು.
ಬದುಕಲು ನ್ಯಾಯವಾದ ಸಾವಿರ ಮಾರ್ಗಗಳಿವೆ, ಹುಡುಕಿಕೊಳ್ಳಬೇಕು. ಇದಕ್ಕೂ ಮುನ್ನ ನಿಮ್ಮಲ್ಲೊಂದು skill ಇರಬೇಕು. ನಿಮ್ಮಲ್ಲಿ ನ್ಯಾಯವಾದ ಯಾವ ಕೌಶಲ್ಯವಿದೆ ಎನ್ನುವುದನ್ನು ನೀವೇ ಪ್ರಶ್ನಿಸಿಕೊಳ್ಳಿ. ನಿಮ್ಮಲ್ಲಿರುವ ಕೌಶಲ್ಯವನ್ನು ಆಧರಿಸಿ ಜೀವನ ಆರಂಭಿಸಿದಾಗ ಯಶಸ್ಸು ಸಾಧ್ಯ. 'ಇವನು ಮಿಂಡರಿಗೆ ಹುಟ್ಟಿದವನು' ಎನ್ನುವ ಭಾವ ಯಾರಿಂದಲೂ ಬರಬಾರದು.
ನ್ಯಾಯದಾನ ನ್ಯಾಯಾಲಯದ ಪ್ರಕ್ರಿಯೆ. ದಾಖಲೆ, ಸಾಕ್ಷಿ, ವಾದ ವಿವಾದಗಳ ಮೇಲೆ ಅದು ನಡೆಯುತ್ತದೆ. ನ್ಯಾಯ ಸಿಕ್ಕಿಲ್ಲ ಅನ್ನುವುದು ತಪ್ಪು. ನ್ಯಾಯ ಪಡೆಯಲಿಕ್ಕೆ ಹಲವು ಮಾರ್ಗಗಳಿವೆ. ಈ ಹೋರಾಟಗಳಿಂದ ನ್ಯಾಯ ಸಿಗುವುದಿಲ್ಲ. ಹೋರಾಟ ಎನ್ನುವುದು ಸಂವಿಧಾನದ ವಿರುದ್ಧ ಪದ. ಅದೊಂದು ಇತ್ತೀಚಿನ ದಂದೆ.
12 ತಿಂಗಳಿನೊಳಗೆ ಪತ್ರಿಕೆ ಪ್ರಿಂಟ್ ಮಾಡಿ ಅದನ್ನು ಸೂಕ್ತ ಪ್ರಾಧಿಕಾರದ ಮುಂದೆ ಸಲ್ಲಿಸದಿದ್ದರೆ ಹೊಸ ಕಾಯ್ದೆಯ ಪ್ರಕಾರ ಆ ಪತ್ರಿಕೆ ರದ್ದಾಗುತ್ತದೆ. ಈಗ ನಿಮ್ಮ ಪತ್ರಿಕೆಗಳು ಜಿಲ್ಲಾ ಪತ್ರಿಕಾ ನೋಂದಣಾ ಪಟ್ಟಿಯಲ್ಲಿ ಜೀವಂತ ಇವೆಯಾ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಇರದಿದ್ದರೆ ಶಿವಾಯ ನಮಃ!

ತಾಲ್ಲೂಕಿನ ದೊಡ್ಡ ಸಮುದಾಯ ಮತ್ತು ಮೀಸಲು ಕ್ಷೇತ್ರವನ್ನು ಹೊಂದಿದೆ ಮತ್ತು ಯಾವುದೇ ಅಭಿವೃದ್ಧಿ ಸಾಧಿಸಿಲ್ಲ! ಇದಕ್ಕೆ ಮೀಸಲು ಕ್ಷೇತ್ರದ ಚುನಾಯಿತ ಹಾಲಿ ಮತ್ತು ಮಾಜಿಗಳು ಏನಂತಾರೆ? ಕ್ಷೇತ್ರದ ಅಭಿವೃದ್ಧಿಗಾಗಿ ಬಂದ ಸಹಸ್ರಾರು ಕೋಟಿ ಅನುದಾನ ಏನಾಯಿತು? ವಿವಾದಗಳನ್ನು ಸೃಷ್ಟಿಸುವುದೇ ಅಭಿವೃದ್ಧಿಯಾ?

ನಮ್ಮ ನಾತಗೇಡಿಗಳಿಗೆ ಕಾನೂನಿನ ಅರಿವೇ ಇಲ್ಲ. ಸುಮ್ಮನೆ ಜನರನ್ನು ದಾರಿ ತಪ್ಪಿಸುತ್ತಾರೆ. ಆ ಮೂಲಕ ಸರ್ಕಾರವನ್ನೂ. ಸರ್ಕಾರವನ್ನು ಏಕೆ ದಾರಿ ತಪ್ಪಿಸುತ್ತಾರೆ ಎಂದರೆ, ಸರ್ಕಾರ ನಡೆಸುವವರು ವಂಚಕರಾಗಿರುವುದರಿಂದ!

ಕೊಪ್ಪಳದಲ್ಲಿ ಬಲ್ಡೋಟ ಕಂಪನಿ ಸಿಬ್ಬಂದಿ ದರ್ಪ.. ಕೆರೆ ನೀರು ಬಳಕೆಗೆ ಹೈಕೋರ್ಟ್ ಸಮ್ಮತಿಸಿದ್ರೂ ಅವಕಾಶ ಕೊಡದೆ ಹಲ್ಲೆ..
ಈ ಸರ್ಕಾರದ ಕಾರ್ಯದರ್ಶಿಗಳಿಗೆ(ಎಲ್ಲಾ ಇಲಾಖೆ) ಬರೆಯುವ ದೂರುಗಳಿಗೆ ಮಾರುತ್ತರವಿಲ್ಲ.ಬರೆದು ಬರೆದು ಸುಸ್ತಾಗಿ ಹೋದೆ, ಕೆಲಸಕ್ಕೆ ಬಾರದ ವಿಷಯವೊಂದು ತೆಗೆದುಕೊಂಡು ಸರ್ಕಾರದ ಸ್ಪಂದನೆ ಎನ್ನುವ ಪ್ರಚಾರ.ಇದೊಂದು ವ್ಯರ್ಥ ಸರ್ಕಾರ ಅಥವಾ ಭ್ರಷ್ಟಾಚಾರಿಗಳ ಸರ್ಕಾರ! ನಾನು, ಅನ್ಯಾಯದ ವಿರುದ್ಧ ತಂಡ ಮೂಡಿಸುತ್ತಿರುವ ಜಾಗೃತಿಗೆ ಸರ್ಕಾರಕ್ಕೆ ಕಿವಿ ಇಲ್ಲ