ಚೇತನ್ ಸೂರ್ಯ ಎಸ್ - Chethan Surya S
@Chethan_Surya_S
ಕನ್ನಡ ಅಸ್ಮಿತೆ..! 💛❤️ ಪ್ರಾದೇಶಿಕತೆ..! ನೊಂದವರೆಲ್ಲರೂ ನನ್ನವರು..! ಕನ್ನಡ-ಕನ್ನಡಿಗರು-ಕರ್ನಾಟಕಕ್ಕಾಗಿ ಸದಾ..!✊
💛❤️✊ ಈ ವಿಡಿಯೋದಲ್ಲಿ ನಾವುಗಳು ರೌಡಿಗಳಂತೆ ಕಂಡರೆ‚ ಕೇಳಿಸ್ಕೊಳ್ಳಿ ಕನ್ನಡಕ್ಕಾಗಿ ರೌಡಿಗಳಾಗೋಕು ಸಿದ್ದ.. ಪೋಲೀಸರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಕನ್ನಡ ಪಾಠ ಮಾಡಿ ಅವನೂರಿಗೆ ವಾಪಾಸ್ ಓಡಿಸಿದ್ದೇವೆ. ✊ #ಕನ್ನಡ #Kannada #stophindiarrogance #chethan_surya #ಚೇತನ್_ಸೂರ್ಯ #yuvakarnatakavedike #ಯುವ_ಕರ್ನಾಟಕ_ವೇದಿಕೆ
ಬೆಂಗಳೂರು ಕನ್ನಡಿಗರದ್ದು.!💛❤️ ನೆನ್ನೆ ಕಾನೂನು ಬಾಹಿರವಾಗಿ ತೆಲುಗು ಡಿಜೆ ಕಾರ್ಯಕ್ರಮ ಆಯೋಜಿಸಿದ್ದ ಸಂಧ್ಯಾ ಚಿತ್ರಮಂದಿರಕ್ಕೆ ತೆರಳಿ ಆಯೋಜಕರಿಗೆ ಪೋಲೀಸರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಪ್ರಶ್ನೆ ಮಾಡಿದ್ದೇನೆ ಈಗಾಗಲೇ ಆಯೋಜಕರು ಕನ್ನಡಿಗರ ಕ್ಷಮೆ ಕೇಳಿದ್ದು ಇನ್ನೆಂದಿಗೂ ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜಾತ್ಯತೀತ ಜನತಾದಳವು ಕನ್ನಡ ನೆಲದ ಪ್ರಾದೇಶಿಕ ಪಕ್ಷ‚ ಕನ್ನಡಿಗರ ಪಕ್ಷ ಅನ್ನೋದನ್ನ ಮರೆಯಬೇಡಿ. ಕನ್ನಡಿಗ ಎಂಬ ಸ್ವಾಭಿಮಾನ ಇರಲಿ ಹಿಂದಿ ಗುಲಾಮಗಿರಿ ಬೇಡ. @SamManjuJDS ನೆಲದ ಪಕ್ಷವಾಗಿ ತ್ರಿಭಾಷೆ ವಿರುದ್ಧದ ಹೋರಾಟ ಮಾಡಿ ದ್ವಿಭಾಷೆ ನೀತಿಗೆ ಆಗ್ರಹಿಸಬೇಕು ಕೂಡಲೇ ನಿಮ್ಮ ಹೇಳಿಕೆ ಹಿಂಪಡೆಯಿರಿ @JanataDal_S #ಹಿಂದಿ_ಹೇರಿಕೆ_ನಿಲ್ಲಿಸಿ
ಪೋಲೀಸರ ಆದೇಶಕ್ಕೂ ಬೆಲೆ ನೀಡದ ಸಂಧ್ಯಾ ಥಿಯೇಟರ್ ಮೇಲೆ ಕ್ರಮ ಏನು.? @BlrCityPolice ಯಾವ ಪುರುಷರ್ಥಕ್ಕೆ ಅನುಮತಿ ನೀಡಿದ್ದೀರಿ? ಇಂದು ಪವನ್ ಕಲ್ಯಾಣ್ ಅಭಿಮಾನಿಗಳು ಡಿಜೆ ಕಾರ್ಯಕ್ರಮ ಮಾಡೋದು ಅವರನ್ನ ನೋಡಿಕೊಂಡು ಮತ್ತೊಬ್ಬ ನಟನ ಅಭಿಮಾನಿಗಳು ಡಿಜೆ ಕಾರ್ಯಕ್ರಮ ಮಾಡೋದು ಎಲ್ಲಿಗೆ ತಂದು ಇಡ್ತೀರಿ ಬೆಂಗಳೂರನ್ನು.? @madivalaps

ಇದುವೇ ನನ್ನ ವಾದ..!💛❤️ ಬಡ ಜನರವರು ಅವರ ನೋವಿನಲ್ಲಿ ಯಾರೂ ರಾಜಕೀಯ ಮಾಡಬೇಡಿ..🙏 ಮುಖ್ಯವಾಗಿ ಅವರನ್ನು ತೆರಿಗೆ ಕಳ್ಳರಂತೆ ಕಾಣಬೇಡಿ.. ಅರ್ಥ ಮಾಡಿಕೊಳ್ಳಿ ಅವರಿಗೆ ಡಿಜಿಟಲ್ ಪಾವತಿ ಬಗ್ಗೆ ಇರದ ಮಾಹಿತಿ ಕೊರತೆ ಈ ದುರಂತಕ್ಕೆ ಕಾರಣ..! ರಾಜ್ಯ ಸರ್ಕಾರ ಹಾಗೂ ಒಕ್ಕೂಟ ಭಾರತ ಸರ್ಕಾರ ಸೇರಿ ಬಡವರ ಪರ ನಿಲ್ಲಿ..!🙏 @siddaramaiah
GST ಮಾಡಿದ್ದು ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರ ಇಬ್ಬರ ನಡುವೆ ಸಾಯ್ತಿರೋನು ಮಾತ್ರ ಮತದಾರ..! ಇಬ್ಬರಲ್ಲಿ ಒಬ್ಬರಾದರೂ ಸ್ಕ್ಯಾನರ್ ಬಳಸಿ ವ್ಯಾಪಾರ ಮಾಡಿದ್ರೆ ತೆರಿಗೆ ಹಾಕ್ತಿವಿ ಅಂತ ಮೊದಲೇ ಜಾಗೃತಿ ಮೂಡಿಸಿಲ್ಲ ಏಕೆ? ಡಿಜಿಟಲ್ ಕ್ರಾಂತಿ ಅಂತೆಲ್ಲ ಹೇಳಿ ಏಕಾಏಕಿ 30-60 ಲಕ್ಷ ನೋಟಿಸ್ ಕೊಡೊ ನೀವು ಜನ ರಕ್ಷಣೆ ಮಾಡೋರ.?
ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲಾದ ಮಾಧ್ಯಮಗಳ ಪೈಕಿ‚ ಈ ಮಾಧ್ಯಮದ ಮುಖ್ಯಸ್ಥ ಬಳಸುತ್ತಿರುವ ಪದಗಳು ನೋಡಿ..!😊 ಮೊದಲಿಗೆ ನಾನು ಯೂಟ್ಯೂಬರ್ ಸಮೀರ್ ಪರ ಆಗಲಿ ಅಥವಾ ಪ್ರಕರಣ ವಿರುದ್ಧವಾಗಿ ಅಲ್ಲಾ ನ್ಯಾಯದ ಪರ.! ಈಗಾಗಲೇ SIT ರಚನೆಯಾಗಿದೆ. ಅವರ ಫಲಿತಾಂಶ ಬರುವ ಮುನ್ನವೇ ಈ ಪರಿಯಾಗಿ ಮಾತಾಡೋ ನಿಮ್ಮದು ಅದಾವ ಪತ್ರಿಕಾ ಧರ್ಮ ಸ್ವಾಮಿ.!?
ನೀವು ಕನ್ನಡ ನೆಲದಿಂದ ಆಯ್ಕೆಯಾದ ಕನ್ನಡಿಗ ಅಂತ ಹೇಳ್ಕೊಳ್ಳೋಕೆ ನಾಚಿಕೆ ಆಗಲ್ವ.? @JoshiPralhad ರಾಷ್ಟ್ರೀಯ ಮಾಧ್ಯಮದಲ್ಲಿ ಕೂತು ಕರ್ನಾಟಕದ ನನ್ನ ಕನ್ನಡವನ್ನು ಕನ್ನಡ್ ಅನ್ನೋವಷ್ಟು ಗುಲಾಮಗಿರಿ ಏಕೆ..? ಜೊತೆಗೆ ಭಾಷೆ ವಿವಾದ ಯಾರೂ ಮಾಡಿಲ್ಲ ನನ್ನ ನೆಲದಲ್ಲಿ ನನ್ನ ಭಾಷೆಯ ರಕ್ಷಣೆ ನಮ್ಮ ಹಕ್ಕು ಅದ್ನ ವಿವಾದ ಅನ್ನೋದು ನಿಮ್ಮ ಮೂರ್ಖತನ.!
ಅದೇ ರಾಗ ಅದೇ ಹಾಡು.! 04 ವರ್ಷಗಳ ಹಿಂದಿನ ನೋಟಿಫಿಕೇಶನ್ಗೆ ಕಷ್ಟ ಪಟ್ಟು ಎಲ್ಲಾ ಹಂತದಲ್ಲೂ ಉತ್ತಿರ್ಣರಾಗಿ 8 ತಿಂಗಳ ಹಿಂದೆಯೇ ಫಲಿತಾಂಶವೂ ಬಂದರೂ ಸಹ‚ ಅರ್ಹ #402PSI ಅಭ್ಯರ್ಥಿಗಳ ಪಾಲಿಗೆ ಆದೇಶ ಪ್ರತಿ ಎಂಬುದು ಕನಸಾಗಿಯೇ ಉಳಿದಿದೆ. ಇನ್ನೆಷ್ಟು ದಿನಗಳು ಕಾಡಿಸಿ ಕಾಯಿಸುತ್ತೀರಾ.? @DrParameshwara ರಕ್ಷಣೆ ನೀಡೋರನ್ನ ರಕ್ಷಿಸಿ.!🙏
GST ಮಾಡಿದ್ದು ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರ ಇಬ್ಬರ ನಡುವೆ ಸಾಯ್ತಿರೋನು ಮಾತ್ರ ಮತದಾರ..! ಇಬ್ಬರಲ್ಲಿ ಒಬ್ಬರಾದರೂ ಸ್ಕ್ಯಾನರ್ ಬಳಸಿ ವ್ಯಾಪಾರ ಮಾಡಿದ್ರೆ ತೆರಿಗೆ ಹಾಕ್ತಿವಿ ಅಂತ ಮೊದಲೇ ಜಾಗೃತಿ ಮೂಡಿಸಿಲ್ಲ ಏಕೆ? ಡಿಜಿಟಲ್ ಕ್ರಾಂತಿ ಅಂತೆಲ್ಲ ಹೇಳಿ ಏಕಾಏಕಿ 30-60 ಲಕ್ಷ ನೋಟಿಸ್ ಕೊಡೊ ನೀವು ಜನ ರಕ್ಷಣೆ ಮಾಡೋರ.?
ಸರ್ಕಾರಿ ಶಾಲೆ ಉಳಿಸೋದು ಸೇವೆಯಲ್ಲ ಕರ್ತವ್ಯ.!💛❤️ #ಸರ್ಕಾರಿ_ಶಾಲೆ_ಉಳಿಸಿ
ರಾಜ್ಯ ಸರ್ಕಾರ ರಚಿಸಿದ SIT ಯು ಯಾರದ್ದೇ ಒತ್ತಡಕ್ಕೂ ಮಣಿಯದೆ‚ ಸಾಕಷ್ಟು ವರ್ಷಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋದ ಸತ್ಯವನ್ನು ಹೊರ ತರುವ ಮೂಲಕ ವ್ಯವಸ್ಥೆ ಮೇಲಿನ ಅಪನಂಬಿಕೆಯನ್ನ ಹೋಗಲಾಡಿಸಿ ನಂಬಿಕೆ ಬರೋ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಕೇಳಿಕೊಳ್ಳುತೇನೆ.. ಆದಷ್ಟು ಬೇಗ ಅಸಲಿ ಸತ್ಯ ಹೊರಬರಲೆಂದು ಆಶಿಸುತ್ತೇನೆ.!💛❤️ #ಧರ್ಮಸ್ಥಳ
ದಿನೇ ದಿನೇ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ ಆಗ್ತಿರಲು ಕಾರಣ ಯಾರು.!? ಸರಿಯಾದ ಪ್ರಮಾಣದ ಮೂಲಭೂತ ಸೌಕರ್ಯ ನೀಡದ ಸರ್ಕಾರವೋ..? ಪ್ರತಿಷ್ಠೆಗಾಗಿ ಖಾಸಗಿ ಶಾಲೆ ಮೊರೆ ಹೋಗ್ತಿರುವ ಪೋಷಕರದ್ದೋ..? #ಸರ್ಕಾರಿಶಾಲೆಉಳಿಸಿ 🙏💛❤️ #savegovernmentschool #ಸರ್ಕಾರಿಶಾಲೆ #governmentschool #chethan_surya #ಚೇತನ್_ಸೂರ್ಯ
ಎರಡನೇ ದಿನ..!💛❤️ ಯಶಸ್ವಿ ಅಭಿಯಾನದಲ್ಲಿ ಕೈಗೊಂಡ ಕೆಲಸಗಳು.👇 1. ಶಾಲೆಯ ಗೇಟಿನ ದುರಸ್ಥಿ ಕಾರ್ಯಾಚರಣೆ. 2. ಹೊಡೆದ ಪೈಪಿನ ದುರಸ್ಥಿ ಕಾರ್ಯಾಚರಣೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ನನ್ನ ಸ್ನೇಹಿತರು ಸಹಪಾಠಿಗಳು ಎಲ್ಲರಿಗೂ ಸದಾ ಚಿರಋಣಿ..🙏 ನನ್ನ ಸರ್ಕಾರಿ ಶಾಲೆ ನನ್ನ ಹೆಮ್ಮೆ..!💛❤️
ನಾನು ಓದಿದ್ದ ನನ್ನ ಸರ್ಕಾರಿ ಶಾಲೆಗೆ ನಮ್ಮ ಸಣ್ಣ ಅಳಿಲು ಸೇವೆ..!💛❤️ ಮಳೆಯಿಂದ ಹಾಳಾಗಿದ್ದ ಶಾಲಾ ಮೈದಾನ ಹಾಗೂ ಮರಳಿನ ಪ್ರಮಾಣ ಕಡಿಮೆ ಇದ್ದ ಕಾರಣ ಆಡುವ ಮಕ್ಕಳು ಕೈಕಾಲು ಗಾಯ ಮಾಡಿಕೊಂಡಿದ್ದನ್ನು ಗಮನಿಸಿ‚ ಯಾರ ಬಳಿಯೂ ದೇಣಿಗೆ ಪಡೆಯದೇ ೨ ಲೋಡ್ ಮರಳು ತರಿಸಿ ಜೆಸಿಬಿ ಮೂಲಕ ವಿತರಿಸಲಾಯಿತು. ಇನ್ನೂ ಹಲವು ಜವಾಬ್ದಾರಿ ತೆಗೆದುಕೊಂಡಿದ್ದೇವೆ.
ನಾನು ಓದಿದ್ದ ನನ್ನ ಸರ್ಕಾರಿ ಶಾಲೆಗೆ ನಮ್ಮ ಸಣ್ಣ ಅಳಿಲು ಸೇವೆ..!💛❤️ ಮಳೆಯಿಂದ ಹಾಳಾಗಿದ್ದ ಶಾಲಾ ಮೈದಾನ ಹಾಗೂ ಮರಳಿನ ಪ್ರಮಾಣ ಕಡಿಮೆ ಇದ್ದ ಕಾರಣ ಆಡುವ ಮಕ್ಕಳು ಕೈಕಾಲು ಗಾಯ ಮಾಡಿಕೊಂಡಿದ್ದನ್ನು ಗಮನಿಸಿ‚ ಯಾರ ಬಳಿಯೂ ದೇಣಿಗೆ ಪಡೆಯದೇ ೨ ಲೋಡ್ ಮರಳು ತರಿಸಿ ಜೆಸಿಬಿ ಮೂಲಕ ವಿತರಿಸಲಾಯಿತು. ಇನ್ನೂ ಹಲವು ಜವಾಬ್ದಾರಿ ತೆಗೆದುಕೊಂಡಿದ್ದೇವೆ.




ನಂಗೋಕೆ ಹೊಸ ಯೋಜನೆ..!? ಇರೋ ಇಂದಿರಾ ಕ್ಯಾಂಟೀನ್ ನಲ್ಲಿಯೇ ಗುಣಮಟ್ಟದ ಊಟ ಕೊಡೊ ಯೋಗ್ಯತೆ ಇಲ್ಲದವರು ನಾಯಿಗಳಿಗೆ ಚಿಕನ್ ಊಟ ಕೊಡ್ತಾರಂತೆ..!😡 ಮನುಷ್ಯರಾದ್ರೆ ನಿಮ್ಮ ಮೋಸದಾಟ ಬಗ್ಗೆ ಪ್ರಶ್ನೆ ಮಾಡ್ತಾರಂತ ಮೂಕ ನಾಯಿಗಳ ಹೆಸರಿನಲ್ಲಿ ಲೂಟಿ ಹೊಡೆಯಲು ಹೋಗ್ತಿರುವ ಅಯೋಗ್ಯರಿಗೆ ಧಿಕ್ಕಾರ..✊ 2.8 ಕೋಟಿ ಲಿ ಯಾವ ನಾಯಿಗಳ ಪಾಲು ಎಷ್ಟು..!?
ನೆನ್ನೆ ರಾತ್ರಿ ಹತ್ತಾರು ವಾಹನಗಳ ಗ್ಲಾಸ್ ಹೊಡೆದ ಕಿರಾತಕರು. ಈ ಘಟನೆ ನಡೆದಿರುವುದು ಹೊಂಗಸಂದ್ರ 7ನೇ ಮುಖ್ಯರಸ್ತೆ ಆಕ್ಸ್ಫರ್ಡ್ ಕಾಲೇಜ್ ಹಿಂಭಾಗದ ರಸ್ತೆಯಲ್ಲಿ. ಇಂತಹ ಘಟನೆಗಳು ದಿನೇ ದಿನೇ ಮರುಕಳಿಸುತ್ತಿದೆ ಈ ರೀತಿ ಸಾರ್ವಜನಿಕರ ವಾಹನಗಳನ್ನು ಹಾನಿ ಮಾಡೋ ಇಂಥವರ ವಿರುದ್ಧ ಕ್ರಮ ಜರುಗಿಸಲೇಬೇಕು.. @BlrCityPolice @blrcitytraffic
ಪ್ರಶ್ನೆ :-ಕರ್ನಾಟಕದಲ್ಲಿ ಕನ್ನಡಿಗನ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ..? ಉತ್ತರ :-👇😊 ಇನ್ನೂ ಭಾಷೆಗಾಗಿ ಒಗ್ಗೂಡದೆ ಇದ್ರೆ ಮತ್ತಷ್ಟು ಭಯಾನಕ ನಾಳೆಗಳ ಎದುರಿಸಲು ಸಿದ್ದರಾಗಿ.
ಕರ್ನಾಟಕದಲ್ಲಿ ಕನ್ನಡ ಕಡೆಗಣಿಸುವವರಿಗೆ ನಾವು ಕೊಡ್ತಿರುವ ಮಾತಿನ ಏಟಿಗೆ ನಮ್ಮನ್ನು ರೌಡಿಗಳೆಂದು ಜರಿಯುವವರು‚ ಮಹಾರಾಷ್ಟ್ರದಲ್ಲಿ ಮರಾಠಿ ಕಡೆಗಣಿಸುತ್ತಿರುವವರಿಗೆ ಅಲ್ಲಿ ದೊಣ್ಣೆ ಏಟು ಕೊಡ್ತಿದ್ರು ತುಟಿ ಬಿಚ್ಚದೇ ಇರುವುದು ಅವರ ಉದ್ದೇಶ ಸ್ಪಷ್ಟಪಡಿಸುತ್ತಿದೆ. ಭಾಷೆ ಉಳಿವಿನ ಹೋರಾಟದಲ್ಲಿ ಕನ್ನಡಿಗರಲ್ಲಿ ಮಾನವೀಯತೆ ಇನ್ನೂ ಉಳಿದಿದೆ.💛❤️